ಪೊಲೀಸ್ ಕ್ವಾರ್ಟರ್ಸ್ - ಸೈನೈಡ್ ಚಿತ್ರದ ನಿರ್ದೇಶನಕ್ಕೆ ಹೆಸರುವಾಸಿಯಾದ ರಮೇಶ್ ನಿರ್ದೇಶನದ 2010 ರ ಚಲನಚಿತ್ರವಾಗಿದೆ. ಈ ಚಲನಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಯಿತು, ತಮಿಳು ಆವೃತ್ತಿಯನ್ನು ಕಾದಲರ್ ಕುಡಿಯಿರಿಪ್ಪು ಎಂದು ಹೆಸರಿಸಲಾಗಿದೆ . ಇದರಲ್ಲಿ ಅನೀಶ್ ತೇಜೇಶ್ವರ್ ಮತ್ತು ಸೋನು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ದಿಲೀಪ್ ರಾಜ್, ಶರಣ್ಯ ಪೊನ್ವಣ್ಣನ್ ಮತ್ತು ಅವಿನಾಶ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಜೇಮ್ಸ್ ವಸಂತನ್ ಸಂಗೀತ ಸಂಯೋಜಿಸಿದ್ದಾರೆ. == ಪಾತ್ರವರ್ಗ == ಅಶ್ವಿನ್ ಪಾತ್ರದಲ್ಲಿ ಅನೀಶ್ ತೇಜೇಶ್ವರ್ ಅನಿತಾ ಪಾತ್ರದಲ್ಲಿ ಸೋನು ರಾಜು ಪಾತ್ರದಲ್ಲಿ ದಿಲೀಪ್ ರಾಜ್ ಜಯಮ್ಮ ಪಾತ್ರದಲ್ಲಿ ಶರಣ್ಯ ಪೊನ್ವಣ್ಣನ್ ವಿಶ್ವಣ್ಣನಾಗಿ ಅವಿನಾಶ್ ವೆಂಕಟೇಶ್ ಗೌಡ ಪಾತ್ರದಲ್ಲಿ ಧರ್ಮ ಲೋಹಿತ್ ಲೋಹಿತ್ ರೋಹಿಣಿ ಪುಷ್ಪಾ == ಧ್ವನಿಮುದ್ರಿಕೆ == ಜೇಮ್ಸ್ ವಸಂತನ್ ಅವರು ಧ್ವನಿಪಥವನ್ನು ರಚಿಸಿದ್ದಾರೆ, ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರ ಪದಾರ್ಪಣೆ ಆಗಿದೆ. == ವಿಮರ್ಶೆಗಳು == ಟೈಮ್ಸ್ ಆಫ್ ಇಂಡಿಯಾ ಬರೆದುಕೊಂಡಿದ್ದು, "ಕ್ಲೈಮ್ಯಾಕ್ಸ್ ಅತಿಯಾದ ಭಾವನಾತ್ಮಕವಾಗಿದ್ದರೂ ರಮೇಶ್ ಉತ್ತಮ ಚಿತ್ರಕಥೆಯೊಂದಿಗೆ ಕಥೆಗೆ ನ್ಯಾಯ ಸಲ್ಲಿಸಿದ್ದಾರೆ. ಚಲನಚಿತ್ರದ ನಿರೂಪಣೆಯಲ್ಲಿ ಅವರ ಹಿಂದಿನ ಚಲನಚಿತ್ರ ಸೈನೈಡ್‌ನ ಆ ಸ್ಪರ್ಶವು ಕಾಣೆಯಾಗಿದೆ. == ಉಲ್ಲೇಖಗಳು ==